ಮುಂಗಾರು ಮಳೆಯೆ

ಮುಂಗಾರು ಮಳೆ
ಸೋನು ನಿಗಮ್
ಜಯಂತ್ ಕಾಯ್ಕಿಣಿ
ಮನೋ ಮೂರ್ತಿ

ಮುಂಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ

ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ

ಸುರಿವ ಒಲುಮೆ ಜಡಿ ಮಳೆಗೆ ಪ್ರೀತಿ ಮೂಡಿದೆ

ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೊ

ಒಲವು ಎಲ್ಲಿ ಕುಡಿಯೊಡೆಯುವುದೊ ತಿಳಿಯದಾಗಿದೆ || ಪ ||

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು

ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು

ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮ ನಾದವೊ

ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು

ಬರೆದು ಹೆಸರು ಕಾಮನಬಿಲ್ಲು ಏನು ಮೋಡಿಯೊ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೊ

ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೊ

ಯಾರ ಉಸಿರಲಿ ಯಾರ ಹೆಸರೊ ಯಾರು ಬರೆದರೊ

ಯಾರ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೊ

ಯಾರ ಪ್ರೇಮ ಪೂಜೆಗೆ ಮುಡಿಪೊ ಯಾರು ಬಲ್ಲರು

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಒಲವ ಚಂದಮಾಮ ನಗುತ ಬಂದ ಮನದಂಗಳಕೆ

ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ

ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವು

ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು

ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವು

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಮುಂಗಾರು ಮಳೆ

ಚಿತ್ರ ನೋಡಿ